Political

ಪುಲ್ವಾಮಾ ದಾಳಿ : ದೇಶದ ಯೋಧರಿಗೆ ನಮನವೇ ಹೊರತು ಮೋದಿಗಲ್ಲ : ಸಿದ್ದರಾಮಯ್ಯ

April 5, 2019

ಬೆಂಗಳೂರು: ಭಾರತೀಯ ಯೋಧರ ಬಗ್ಗೆ ನಮಗೆಲ್ಲಾ ಅಪಾರ ಗೌರವವಿದೆ. ನಮ್ಮ ನಮನ ಸಲ್ಲಿಸಬೇಕಾದ್ದು ಸೈನಿಕರಿಗೆ ಹೊರತು, ಬಿಜೆಪಿಯವರಿಗೆ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಭೈರೇಗೌಡರ ಪರ ಶುಕ್ರವಾರ ಕೆಆರ್ ಪುರದ ಡಾ. ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಒಬ್ಬರೇ ಈ ದೇಶ ರಕ್ಷಣೆ ಮಾಡುವವರು ಬೇರೆ ಯಾರ ಕೈಲೂ ಮಾಡೋಕಾಗಲ್ಲ ಅಂತ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಪುಲ್ವಾಮಾದಲ್ಲಿ ೪೨ ಜನ ಯೋಧರು ಸತ್ತರು. ಸರ್ಜಿಕಲ್ ಸ್ಟ್ರೈಕ್ ರಾಜಕೀಯವಾಗಿ ಬಳಸಿಕೊಳ್ಳಲು ಮೋದಿ, ಬಿಜೆಪಿ ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ೧೨ ಸರ್ಜಿಕಲ್ ಸ್ಟ್ರೈಕ್ ಆಗಿದೆ, ೪ ಯುದ್ದಗಳಾಗಿವೆ. ನಾಲ್ಕೂ ಬಾರಿಯೂ ಕೂಡ ನಾವು ಯುದ್ದದಲ್ಲಿ ಎದುರಾಳಿಯನ್ನು ಸೋಲಿಸಿದ್ದೀವಿ. ಇಂದಿರಾಗಾಂಧಿ ಇದ್ದಾಗ ಯುದ್ದ ಮಾಡಿ ಬಾಂಗ್ಲಾದೇಶ ನಿರ್ಮಾಣ ಆಯ್ತಲ್ಲಾ ಅದು ಮೋದಿಯವರು ಮಾಡಿದ್ದಾ..? ಇದೇ ವಾಜಪೇಯಿಯವರು ಇಂದಿರಾಗಾಂಧಿ ಅವರನ್ನು ದುರ್ಗೆ ಎಂದು ಹೇಳಿದ್ದರು. ಮೋದಿಯವರಿಗೆ ಇದನ್ನು ಜ್ಞಾಪಿಸುತ್ತೇನೆ ಅಷ್ಟೆ. ಚರಿತ್ರೆ ಮರಿಬೇಡ್ರಿ ಮೋದಿಯವರೇ. ಟೀಕೆ ಮಾಡಬೇಕು, ಆದರೆ, ಟೀಕೆ ಅರ್ಥಪೂರ್ಣವಾಗಿರಬೇಕು. ಮೋದಿಯವರೇ ನೀವು ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು. ಮೋದಿ ಸ್ವಾತಂತ್ರ್ಯ ಹೋರಾಟ ಮಾಡಿದ್ರಾ..? ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟ ಮಾಡಿ ದೇಶಕ್ಕಾಗಿ ಬಲಿದಾನ ಆಗಿಲ್ಲ... ದೇಶಕ್ಕೆ ಸ್ವಾತಂತ್ರ್ಯ ಹೋರಾಟ ಮಾಡಿ, ಮನೆ ಮಠ ಕಳೆದುಕೊಂಡವರು ನೂರಾರು ಜನ ಇದ್ದಾರೆ.. ಆದರೆ ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟ ಮಾಡ್ಲೇ ಇಲ್ಲ ಎಂದು ಟಾಂಗ್ ನೀಡಿದರು. ಬಿಜೆಪಿಯವರು ಈಗ ನಮ್ಮ ಮುಖ ನೋಡಬೇಡಿ, ಮೋದಿ ಮುಖ ನೋಡಿ ಓಟು ಹಾಕಿ ಎನ್ನುತ್ತಿದ್ದಾರೆ. ನನ್ನ ಮುಖ ನೋಡಬೇಡಿ ಅಂತಾರೆ ಸದಾನಂದಗೌಡ. ಎಲ್ಲರ ಮುಖವನ್ಬೂ ನೋಡಿಯಾಯ್ತು. ಸದಾನಂದಗೌಡರು ಈಗ ಮುಖಹೀನರಾಗಿದ್ದಾರೆ. ಏಕೆಂದರೆ ಸದಾನಂದಗೌಡ ಅವರು ಏನೂ ಕೆಲಸ ಮಾಡಿಲ್ಲ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡ ಮಾತನಾಡಿ, ಉತ್ತರ ಕ್ಷೇತ್ರದ ಎಂಪಿ ಯಾರೂ ಅಂತಲೇ ಇಲ್ಲಿನ ಜನರಿಗೆ ಗೊತ್ತಿಲ್ಲ. ಯಾವತ್ತಾದ್ರೂ ಜನರ ಕೈಗೆ ಸಿಕ್ಕಿದಾರಾ ಹಾಲಿ ಎಂಪಿ..? ಅಭಿವೃದ್ಧಿ ಕೆಲಸಕ್ಕೆ ಎಂದಾದರೂ ಕಾಣಿಸಿದ್ದಾರಾ..? ಯುಪಿಎ ಸರ್ಕಾರ ಇದ್ದಾಗ ತುಮಕೂರು, ಹೊಸೂರು, ಏರ್ಪೋರ್ಟ್ ರೋಡ್ ನಲ್ಲಿ ಫ್ಲೈ ಓವರ್ ನಿರ್ಮಾಣ ಆಯ್ತು... ಯುಪಿಎ ಸ್ಯಾಂಕ್ಷನ್ ಮಾಡಿದ್ದ ಫ್ಲೈ ಓವರ್ ಅದು.. ಆದರೆ ಇದುವರೆಗೂ ಕೂಡ ಎಂಪಿ ಸದಾನಂದಗೌಡರು ಈ ಕ್ಷೇತ್ರಕ್ಕೆ ಒಂದೇ ಒಂದು ಫ್ಲೈ ಓವರ್ ಮಾಡಿಸೋ ಪ್ರಯತ್ನವೇ ಮಾಡಿಲ್ಲ... ಕನಿಷ್ಟ ಅವರಿಗೆ ಇಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಅನ್ನೋ ಮಾಹಿತಿಯಾದ್ರೂ ಇದೆಯಾ..? ಎಲ್ಲಿಂದ ಬಂದ್ರೂ ಅನ್ನೋದು ಮುಖ್ಯ ಅಲ್ಲ ಎಲ್ಲಿಂದ ಎಲ್ಲಿಗೆ ಬೇಕಾದ್ರೂ ಹೋಗಬಹುದು, ಆದರೆ ಇಲ್ಲಿಗೆ ಬಂದ ಮೇಲೆ ಏನ್ ಮಾಡಿದ್ರು ಅನ್ನೋದು ಮುಖ್ಯ....ಸದಾನಂದಗೌಡರು ತನಗೆ ಓಟು ಹಾಕಬೇಡಿ ಮೋದಿ ಅವರಿಗೆ ಓಟ್ ಹಾಕಿ ಅಂತಿದ್ದಾರಂತೆ. .ಸದಾನಂದಗೌಡರು ಮಾನಸಿಕವಾಗಿ ದೈಹಿಕವಾಗಿ ಹೊರಗಿನವರಾಗೇ ಉಳಿದುಬಿಟ್ಟರು. ಇಲ್ಲಿನ ಜನರ ಜೊತೆಗೆ ಬೆರೆಯಲೇ ಇಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಶಾಸಕರು ಹಾಗೂ ಮುಖಂಡರು ಉಪಸ್ಥಿತರಿದ್ದರು. .


Related Post

Category Archive