Political

ಬೆಂಗಳೂರು ಉತ್ತರ ಲೋಕಸಭಾ ಕ್ಷೆತ್ರದಲ್ಲಿ ಬಿರುಸಿನ ಪ್ರಚಾರ ; ದೇಶದ ಯುವಕರ ಭವಿಷ್ಯ ನಿರ್ಧರಿಸುವ ಚುನಾವಣೆ : ಡಿಸಿಎಂ

April 4, 2019

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಠ ಭೈರೇಗೌಡ ಅವರ ಪರ ಡಿಸಿಎಂ ಡಾ.ಜಿ.ಪರಮೇಶ್ವರ ಮತಯಾಚನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಗೆ ಮತ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಮ್ಮಗೊಂಡನಹಳ್ಳಿಯಲ್ಲಿ ಗುರುವಾರ ಚುನಾವಣಾ ಪ್ರಚಾರದಲ್ಲಿ ದಾಸರಹಳ್ಳಿ ಜೆಡಿಎಸ್ ಶಾಸಕ ಮಂಜುನಾಥ್, ಜೆಡಿಎಸ್ ಮುಖಂಡ ಅಂದಾನಪ್ಪ ಸೇರಿದಂತೆ ಹಲವು ಮೈತ್ರಿ ನಾಯಕರು ಭಾಗಿಯಾಗಿದ್ದರು. ಪ್ರಚಾರ ಸಭೆಯಲ್ಲಿ ಡಿಸಿಎಂ ಡಾ.ಜಿ ಪರಮೇಶ್ವರ್ ಮಾತನಾಡಿ, ಈ ಬಾರಿಯ ಚುನಾವಣೆ ಕೇವಲ ಬಿಜೆಪಿ-ಕಾಂಗ್ರೆಸ್ ನಡುವಿನ ಚುನಾವಣಾ ಹೋರಾಟ ಅಲ್ಲ. ದೇಶದ, ಯುವ ಸಮುದಾಯದ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳಲ್ಲಿ ಬರೀ ಮಾತಿನ ಮೋಡಿ ಅಷ್ಟೇ ಪ್ರದರ್ಶಿಸಿದರು. ಪ್ರಪಂಚದಲ್ಲಿ ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ನಿರುದ್ಯೋಗ, ಬೆಲೆ ನಿಯಂತ್ರಣದಲ್ಲಿ ಸಂಪೂರ್ಣ ವಿಫಲರಾದರು. ಬಿಜೆಪಿ ನಾಯಕರು ಸದಾ ದೇಶದ ಭದ್ರತೆ ಬಗ್ಗೆ ಮಾತಾಡುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ದೇಶಕ್ಕೆ ಭದ್ರತೆ ಇರಲಿಲ್ಲವೇ. ಇತ್ತೀಚೆಗೆ ನರೇಂದ್ರ ಮೋದಿ ಅವರು ಮಿಷನ್ ಶಕ್ತಿ ಮಿಸೈಲ್ ನಾವೇ ಕಂಡು ಹಿಡಿದಂತೆ ಮಾತನಾಡಿದರು. ನರೇಂದ್ರ ಮೋದಿ ಹೋಗಿ ನಟ್ಟು ಬೋಲ್ಟ್ ಟೈಟ್ ಮಾಡಿದ್ದರಾ. ಆದರೆ, ಮೋದಿ ಚುನಾವಣೆ ಸಮಯದಲ್ಲಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ನಮ್ಮದೇ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.ಸೈದ್ದಾಂತಿಕವಾಗಿ ಜೆಡಿಎಸ್ ಎರಡು ಪಕ್ಷಗಳು ಒಂದೇ ರೀತಿ ಇವೆ. ಆದರೆ ಬಿಜೆಪಿ ಅಧಿಕಾರಸ್ಥರು ಮತ್ತು ಹಣವಂತರ ಪರ ಇದೆ. ಎರಡೂ ಪಕ್ಷಗಳ ಸೈದ್ದಾಂತಿಕ ಚಿಂತನೆ ಒಂದೇ ಆಗಿರುವುದರಿಂದ ನಾವು ಒಂದಾದೆವು. ಅದರಂತೆಯೇ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ. ಮೊದಲಿಗೆ ಉತ್ತರ ಕ್ಷೇತ್ರವನ್ನು ಎಚ್.ಡಿ ದೇವೇಗೌಡರಿಗೆ ಬಿಟ್ಟುಕೊಟ್ಟಿದ್ದೆವು. ಎಚ್.ಡಿ ದೇವೇಗೌಡರು ತುಮಕೂರು ಬಯಸಿದ್ದರಿಂದ ಇಲ್ಲಿಗೆ ಕೃಷ್ಣ ಭೈರೇಗೌಡರನ್ನು ಇಲ್ಲಿನ ಅಭ್ಯರ್ಥಿ ಮಾಡಿದೆವು. ಇಲ್ಲಿಂದ ಗೆದ್ದು ಹೋದ ಡಿ.ವಿ ಸದಾನಂದಗೌಡರು ಯಾವುದೇ ಕೆಲಸ ಮಾಡಲಿಲ್ಲ. ಬದಲಿಗೆ ಡಿವಿಎಸ್ ನಗುತ್ತಲೇ ಇಡೀ ಐದು ವರ್ಷ ಕಾಲ ಕಳೆದರು ಎಂದು ವ್ಯಂಗವಾಡಿದ ಡಿಸಿಎಂ, ಇದೀಗ ನಿಮ್ಮ ಕೆಲಸ ಮಾಡಿಕೊಡಬಲ್ಲ ದಕ್ಷ ಅಭ್ಯರ್ಥಿ ಕೊಟ್ಟಿದ್ದೇವೆ. ಮುಂದಿನ ಐದು ವರ್ಷಗಳ ಕಾಲ ಮೈತ್ರಿ ಸರಕಾರವೇ ಅಸ್ತಿತ್ವದಲ್ಲಿ ಇರುತ್ತದೆ. ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರಕಾರ ೫೦ ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಿದೆ. ಶಾಸಕನಾಗಿ, ಸಂಸದನಾಗಿ, ಸಚಿವನಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಮತದಾರರು ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡರಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.ಉದ್ಯಾನದಲ್ಲಿ ಮತಯಾಚನೆಬುಧವಾರ ಮಲ್ಲೇಶ್ವರಂ ಮತ್ತು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಗಳಲ್ಲಿ ದಿನವಿಡೀ ಮತಯಾಚನೆ ನಡೆಸಿದರು. ಬೆಳಗ್ಗೆ ಸ್ಯಾಂಕಿ ಟ್ಯಾಂಕ್ ಉದ್ಯಾನದಲ್ಲಿ ವಾಕಿಂಗ್ಗೆ ಆಗಮಿಸಿದ ಜನರನ್ನು ಭೇಟಿಯಾಗಿ ಮತ ನೀಡುವಂತೆ ಮನವಿ ಮಾಡಿದರು. ಮಲ್ಲೇಶ್ವರಂನ ಮಾರ್ಗೊಸ್ಸಾ ರಸ್ತೆಯ ವೀಣಾ ಸ್ಟೋರ್ ಬಳಿ ತೆರಳಿ ಸಾರ್ವಜನಿಕರೊಂದಿಗೆ ಸರತಿ ಸಾಲಿನಲ್ಲಿ ನಿಂತು, ಇಡ್ಲಿವಡೆ ಖರೀದಿಸಿ ಉಪಹಾರ ಸೇವಿಸಿದರು.ಬಳಿಕ ಮಲ್ಲೇಶ್ವರಂ ಮಾರುಕಟ್ಟೆಗೆ ತೆರಳಿ ವ್ಯಾಪಾರಿಗಳ ಕುಂದುಕೊರತೆಗಳನ್ನು ಆಲಿಸಿ, ನಂತರ ಅಶ್ವತ್ಥನಗರದ ವೀರಾಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಕಾಂಗ್ರೆಸ್ ಮುಖಂಡ ಎಂ ಆರ್ ಸೀತಾರಾಮ್ ಅವರೊಂದಿಗೆ ರೋಡ್ ಶೋ ಮೂಲಕ ಮತ್ತಿಕೆರೆ, ಯಶವಂತಪುರ, ಮಲ್ಲೇಶ್ವರಂ, ವೈಯ್ಯಾಲಿಕಾವಲ್ ಸುತ್ತಲಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತಯಾಚನೆ ನಡೆಸಿದರು.ಮಧ್ಯಾಹ್ನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ತೆರಳಿದ ಕೃಷ್ಣ ಭೈರೇಗೌಡರು, ಸ್ಥಳೀಯ ಜೆಡಿಎಸ್ ಶಾಸಕ ಕೆ. ಗೋಪಾಲಯ್ಯ ಹಾಗೂ ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದರು. ಕುರುಬರ ಹಳ್ಳಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣ ಭೈರೇಗೌಡ ಅವರು, ಇಲ್ಲಿಂದ ಸಂಸದರಾಗಿ ಆಯ್ಕೆಯಾದ ಡಿ.ವಿ.ಸದಾನಂದಗೌಡರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿಯೇ ಮುಖವಾಡ ಮುಂದಿಟ್ಟುಕೊಂಡು ಮತ್ತೆ ಓಟು ಕೇಳಲು ಬಂದಿದ್ದಾರೆ. ಬಿಜೆಪಿ ನಾಯಕರು ಹಿಂದೆ ನೀಡಿದ್ದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಬೆಲೆ ನಿಯಂತ್ರಣ, ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ೪೫ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಪ್ರಮಾಣದ ನಿರುದ್ಯೋಗ ಸಮಸ್ಯೆ ಎದುರಾಗಿದೆ ಎಂದು ಆಪಾದಿಸಿದರು. .


Related Post

Category Archive